ಆಡಳಿತ ಮಂಡಳಿ
16 ಮಂದಿ ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯು ಒಟ್ಟು 16ಬಾರಿ ಸಭೆ ಸೇರಿ ಸಂಸ್ಥೆಯ ಬೆಳವಣಿಗೆಗೆ ಸೂಕ್ತ ನಿರ್ದೇಶನ, ಸಕಾಲದಲ್ಲಿ ಉತ್ತಮ ಸಲಹೆ, ನಿಯಮಗಳನ್ನು ಜಾರಿ ಮಾಡಿರುತ್ತದೆ. ಸಾಲದ ಉಪಸಮಿತಿಯು ಸಾಲ ವಿತರಣೆಗೆ ಸೂಕ್ತ ಮಾರ್ಗದರ್ಶನದೊಂದಿಗೆ ಅತೀ ಶೀಘ್ರದಲ್ಲಿ ಸದಸ್ಯರಿಗೆ ಸಾಲ ವಿತರಣೆಯಾಗುವಂತೆ ಕ್ರಮಕೈಗೊಳ್ಳುತ್ತಿದೆ. ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರುಗಳು ತಾವು ಪಡೆಯುತ್ತಿರುವ ಸಭಾ ಭತ್ತೆಯನ್ನು ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ನೀಡುತ್ತಾ ಬಂದಿರುತ್ತಾರೆ.
ಸಾಲ ವಸೂಲಾತಿ ವಿಭಾಗ ಹಾಗೂ ಆಂತರಿಕ ಲೆಕ್ಕಪರಿಶೋಧನಾ ವಿಭಾಗ
ಸದಸ್ಯರಿಗೆ ನೀಡಿದ ಸಾಲದ ಸಮರ್ಪಕವಾದ ಮರುಪಾವತಿಗೆ ಸಂಬಂಧಿಸಿದಂತೆ ಹಾಗೂ ಗುಣಮಟ್ಟದ ಸಾಲ ವಿತರಣೆಯ ಕುರಿತು ಸಮರ್ಪಕವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಕೇಂದ್ರ ಕಚೇರಿಯಲ್ಲಿ ಸಹಕಾರ ಇಲಾಖೆಯಿಂದ ಅನುಮೋದಿಸಲ್ಪಟ್ಟ ಮಾರಟಾಧಿಕಾರಿಯ ಜವಬ್ದಾರಿಯಲ್ಲಿ ಸಾಲ ವಸೂಲಾತಿವಿಭಾಗವನ್ನು ರಚಿಸಲಾಗಿರುತ್ತದೆ ಹಾಗೂ ಸಹಕಾರ ಸಂಘದ ಎಲ್ಲಾ ಶಾಖೆಗಳ ಆಂತರಿಕ ಲೆಕ್ಕರಿಶೋಧನೆಯನ್ನು ನಡೆಸಲು ಆಂತರಿಕ ಲೆಕ್ಕ ಪರಿಶೋಧನೆ ವಿಭಾಗವನ್ನು ರಚಿಸಲಾಗಿದ್ದು ಕಾಲಕಾಲಕ್ಕೆ ಶಾಖೆಗಳ ಲೆಕ್ಕಪತ್ರಗಳು ಹಾಗೂ ಇತರ ಕಾರ್ಯ ಚಟುವಟಿಕೆಗಳ ಬಗ್ಗೆ ತಪಾಸಣೆಯನ್ನು ನಡೆಸುತ್ತಿದೆ. ಮಾನವ ಸಂಪನ್ಮೂಲದ ಅಭಿವೃದ್ಧಿಯ ನಿಟ್ಟಿನಲ್ಲಿ ಸಿಬ್ಬಂದಿಗಳ ದಕ್ಷ ಮೇಲ್ವಿಚಾರಣೆಗಾಗಿ ಮಾನಸಂಪನ್ಮೂಲ ವಿಭಾಗವನ್ನು ರಚಿಸಲಾಗಿರುತ್ತದೆ. ಸಂಘದ ದೈನಂದಿನ ವ್ಯವಹಾರದ ದಕ್ಷತೆಯನ್ನು ಹೆಚ್ಚಿಸಲು ಹಾಗೂ ಆದಾಯ ಸೋರಿಕೆಯ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ.
ಸಿಬ್ಬಂದಿ ವರ್ಗ
ಸಂಸ್ಥೆಯು ವರದಿ ವರ್ಷದಲ್ಲಿ ಒಬ್ಬರು ವಿಶೇಷಾಧಿಕಾರಿ ಸೇರಿ 108 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಅಲ್ಲದೇ ಒಟ್ಟು 54ಮಂದಿ ನಿತ್ಯನಿಧಿ ಸಂಗ್ರಾಹಕರು ಸೇವೆ ಸಲ್ಲಿಸುತ್ತಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉಂಟಾದ ಸ್ಪರ್ಧೆಯನ್ನು ಎದುರಿಸಲು ಹಾಗೂ ಪರಿಣಾಮಕಾರಿ ಆಡಳಿತ ನಿರ್ವಹಣಾ ದೃಷ್ಟಿಯಿಂದ ವರ್ಷಕ್ಕೊಂದು ಸಾಮಾರ್ಥ್ಯಾಭಿವೃದ್ಧಿ ತರಬೇತಿಯನ್ನು ನುರಿತ ಸಂಪನ್ಮೂಲ ವ್ಯಕ್ತಿಯಿಂದ ನೀಡಿರುತ್ತೇವೆ.
ಸಾಮಾಜಿಕ ಚಟುವಟಿಕೆಗಳು
ಕೇವಲ ಬ್ಯಾಂಕಿಗ್ ಚಟುವಟಿಕೆ ಮಾತ್ರ ಸೀಮಿತವಾಗದ ನಮ್ಮ ಸಹಕಾರ ಸಂಸ್ಥೆಯು ಸಾಮಾಜಿಕ ಚಟುವಟಿಕೆಯಲ್ಲೂ ಸಕ್ರಿಯವಾಗಿರುತ್ತದೆ. 'ಕಲಿಕೆಗಾಗಿ ಸಹಾಯ ಸಹಾಯಕ್ಕಾಗಿ ಕಲಿಕೆ'ಎನ್ನುವ ನಮ್ಮ ಸಂಸ್ಥೆಯ ಯೋಜನೆಯಡಿ ದತ್ತು ಸ್ವೀಕಾರ ಕಾರ್ಯಕ್ರಮದಡಿಯಲ್ಲಿ 3 ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪೂರ್ಣ ಖರ್ಚುವೆಚ್ಚ ಭರಿಸಲಾಗಿದ್ದು ಪ್ರಸ್ತುತ ಉತ್ತಮ ಉದ್ಯೋಗ ಲಭಿಸಿ ನೆಮ್ಮದಿಯ ಜೀವನವನ್ನು ನಡೆಸುತ್ತಿರುವುದು ನಾವು ಕಂಡ ಕನಸು ನನಸಾಗಿದೆ. ಒಬ್ಬರು ಮೆಡಿಕಲ್ ವಿದ್ಯಾರ್ಥಿಯ ವ್ಯಾಸಂಗದ ಆಂಶಿಕ ವೆಚ್ಚವನ್ನು ಭರಿಸಲಾಗಿದೆ ಹಾಗೂ ಶ್ರೀ ಗುರುದೇವ ಕಾಲೇಜಿನ ಪದವಿ ವ್ಯಾಸಂಗ ಮಾಡುತ್ತಿರುವ 150 ಪದವಿ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಆರ್ಥಿಕ ನೆರವು ನೀಡಲಾಗುತ್ತಿದೆ. ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿಯಲ್ಲಿ ಹಾಗೂ ಇತರ ಕ್ಷೇತ್ರದಲ್ಲಿ ಅತೀ ಹೆಚ್ಚು ಸಾಧನೆ ಮಾಡಿದ ನಮ್ಮ ಸಂಸ್ಥೆಯ ಸದಸ್ಯರ ಮಕ್ಕಳನ್ನು ಗುರುತಿಸಿ ಪ್ರತಿವರ್ಷ ಮಹಾಸಭೆಯಲ್ಲಿ ಸನ್ಮಾನಿಸಿರುತ್ತೇವೆ. ಶಾಖೆಗಳ ದಶಮಾನೋತ್ಸವದ ಪ್ರಯುಕ್ತ ಸ್ಥಳಿಯ ಸಂಘ ಸಂಸ್ಥೆಗಳಜಂಟಿ ಸಹಯೋಗದಲ್ಲಿ ಸಾಮಾನ್ಯ ರೋಗ ವಿಭಾಗ, ಕ್ಯಾನ್ಸರ್ ತಪಾಸಣೆ, ಕಣ್ಣಿನ ವಿಭಾಗ, ದಂತ ಚಿಕ್ಕಿತ್ಸೆ, ಎಲುಬು ಮತ್ತು ಕೀಲು ರೋಗ ವಿಭಾಗ ಇದರ ಬೃಹತ್ ಆರೋಗ್ಯ ಶಿಬಿರ ನಡೆದು 750 ಮಂದಿ ಫಲಾನುಭವಿಗಳು ತಮ್ಮ ಆರೋಗ್ಯ ತಪಾಸಣೆ ನಡೆಸಿರುತ್ತಾರೆ ಈ ಸಂದರ್ಭದಲ್ಲಿ ಸಂಬಂಧಪಟ್ಟ ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕವನ್ನು ಸಂಘದ ವತಿಯಿಂದ ವಿತರಿಸಲಾಗಿರುತ್ತದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಇನ್ನೂ ಹತ್ತು ಹಲವು ಕಾರ್ಯಕ್ರಮಗಳು ನಮ್ಮ ಮುಂದಿದೆ.
ಕಟ್ಟಡ ನಿವೇಶನ, ಇತರ ಆಸ್ತಿಗಳು
ಬೆಳ್ತಂಗಡಿ ಭಾರತ್ ಪೆಟ್ರೋಲ್ ಪಂಪ್ ನ ಹತ್ತಿರ, ಎಸ್‌ಸಿಡಿಸಿಸಿ ಬ್ಯಾಂಕ್ ನ ಎದುರುಗಡೆಯಲ್ಲಿ ರೂ.92 ಲಕ್ಷಕ್ಕೆ ಖರೀದಿಸಿದ ನಿವೇಶನದಲ್ಲಿ ನಮ್ಮ ಸಂಘದ ಕೇಂದ್ರಕಚೇರಿಯನ್ನು ಒಳಗೊಂಡ ರೂ.5.28 ಕೋಟಿ ವೆಚ್ಚದ ಸುಸಜ್ಜಿತವಾದ ಗುರುಸಾನಿಧ್ಯ ವಾಣಿಜ್ಯ ಸಂಕೀರ್ಣವು 13-07-2024 ರಂದು ಲೋಕರ್ಪಣೆಗೊಂಡಿರುತ್ತದೆ. ಈ ಕಟ್ಟಡದ ನೆಲಹಂತಸ್ತಿನಲ್ಲಿ ವಿಶಾಲವಾದ ವಾಹನ ಪಾರ್ಕಿಂಗ್, ಕೆಳಹಂತಸ್ತು, ಮೊದಲನೆ ಮಹಡಿಯನ್ನು ಬಾಡಿಗಗೆ ನೀಡಲಾಗಿರುತ್ತದೆ. ಎರಡನೇ ಮಹಡಿಯಲ್ಲಿ ಕೇಂದ್ರ ಕಚೇರಿಯು ಕಾರ್ಯಚರಿಸುತ್ತಿದೆ. ಮೂರನೇ ಮಹಡಿಯಲ್ಲಿ ಸಭಾಂಗಣವನ್ನು ಹೊಂದಿರುತ್ತದೆ. 48 ಕಿಲೋ ವ್ಯಾಟ್ ಉತ್ಪಾದನೆಯ ಸೋಲಾರ್ ಘಟಕವನ್ನು ಸ್ಥಾಪಿಸಲಾಗಿರುತ್ತದೆ. ಹಳೆಯಂಗಡಿ, ಬೆಳುವಾಯಿ ಶಾಖೆಗಳನ್ನು ಪ್ರಸ್ತುತ ವರ್ಷದಲ್ಲಿ ಕಬಕ ಶಾಖೆಯನ್ನು ಸ್ವಂತ ಮಾಲೀಕತ್ವಕ್ಕೆ ಖರೀದಿಸಲಾಗಿರುತ್ತದೆ. ವರದಿ ವರ್ಷದಲ್ಲಿ ಒಟ್ಟು ರೂ. 7 ಕೋಟಿ 71 ಲಕ್ಷ ಮೊತ್ತದ ಸ್ಥಿರಾಸ್ತಿಯನ್ನು ಹೊಂದಿರುತ್ತದೆ. ಮೂಡಬಿದ್ರೆ ಶಾಖೆಯ ಸ್ವಂತ ಮಾಲೀಕತ್ವಕ್ಕೆ ಖರೀದಿಯ ಬಗ್ಗೆ ಒಪ್ಪಂದ ಮಾಡಲಾಗಿರುತ್ತದೆ. ಸಂಘವು ರೂ.14625497.00 ಮೌಲ್ಯದ ಪೀಠೋಪಕರಣಗಳೊಂದಿಗೆ ಒಟ್ಟು ರೂ.45706792.00 ಮೌಲ್ಯದ ಇತರ ಆಸ್ತಿಗಳನ್ನು ಹೊಂದಿರುತ್ತದೆ.
ವಿವರಗಳು
| ವಿವರ | 2016-17 | 2017-18 | 2018-19 | 2019-20 | 2020-21 | 2021-22 | 2022-23 | 2023-24 | 2024-25 | 2025-26 |
|---|---|---|---|---|---|---|---|---|---|---|
| ಸದಸ್ಯತನ | 10313 | 13000 | 19667 | 22747 | 26187 | 28273 | 36653 | 41709 | 48080 | - |
| ಪಾಲುವಂತಿಗೆ | 68.20 | 68.45 | 100.05 | 134.38 | 146.22 | 162.19 | 181.30 | 199.36 | 214.44 | - |
| ಠೇವಣಿ | 2623.39 | 3178.30 | 4294.48 | 5480.26 | 7211.94 | 10388.96 | 13916.39 | 18878.21 | 24265.52 | - |
| ಹೊರಬಾಕಿ ಸಾಲ | 2287.45 | 2535.32 | 3531.12 | 4455.56 | 5092.27 | 7431.51 | 11313.98 | 15562.55 | 20487.79 | - |
| ವಿನಿಯೋಗಗಳು | 419.00 | 732.00 | 936.32 | 1441.65 | 2597.54 | 3592.91 | 3550.33 | 4130.00 | 4875.00 | - |
| ಒಟ್ಟು ವ್ಯವಹಾರ | 16271.00 | 21987.87 | 34480.79 | 42583.43 | 42666.15 | 48936.91 | 104796.13 | 112882.00 | 140479 | - |
| ಲಾಭ/ನಷ್ಠ | 90.19 | 93.18 | 110.42 | 104.54 | 114.15 | 157.13 | 225.93 | 384.01 | 484.15 | - |
| ಸಾಲ ವಸೂಲಾತಿ | 96.6 | 97.00 | 97.00 | 96.87 | 96.19 | 96.68 | 98.18 | 98.49 | 98.65 | - |
| ವರ್ಗೀಕರಣ | A | A | A | A | A | A | A | A | A | - |
| ಲಾಭಾಂಶ ಹಂಚಿಕೆ | 12% | 12% | 15% | 15% | 15% | 15% | 15% | 15% | - | - |
ಸಂಘಕ್ಕೆ ಸಂದ ಪ್ರಶಸ್ತಿಗಳು
- ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ ಪುರಸ್ಕೃತ ಸಹಕಾರ ಸಂಘ.
- 2023ರಲ್ಲಿ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ.
- ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ರಲ್ಲಿ ಸತತ 8ವರ್ಷಗಳಲ್ಲಿ ಸಾಧನ ಶ್ರೀ ಪ್ರಶಸ್ತಿ.
- 2015-16 ನೇ ಸಾಲಿನಲ್ಲಿ ದ.ಕ ಜಿಲ್ಲೆಯಲ್ಲಿ ಇಸ್ಟಾಂಪಿಂಗ್ ವಿತರಣೆಯಲ್ಲಿ ದ್ವಿತೀಯ ಸ್ಥಾನದ ಗೌರವ.
- ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದಿಂದ ಸಾಧನ ಪ್ರಶಸ್ತಿ.
- ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ವತಿಯಿಂದ ಪ್ರತಿಷ್ಟಿತ ಸಾಧನಾ ಶ್ರೇಷ್ಠ ಪ್ರಶಸ್ತಿ.
- ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿಯಿಂದ ಬ್ರಹ್ಮಶ್ರೀ ಸಹಕಾರ ಸಾಧನಶ್ರೀ ಪ್ರಶಸ್ತಿ.
- ಜೆಸಿಐ ಬೆಳ್ತಂಗಡಿಯಿಂದ ಸೇವಾ ಶ್ರೀ ಪ್ರಶಸ್ತಿ.