ದಕ್ಷಿಣ ಕನ್ನಡ ಮತ್ತು ಉಡುಪಿಯ ಪ್ರತಿಯೊಂದು ಕುಟುಂಬಕ್ಕೂ ನಂಬಿಕಾರ್ಹ ಬ್ಯಾಂಕಿಂಗ್ ಪಾಲುದಾರ.

ಸಂಸ್ಥೆಯ ಇತರ ಸೇವೆಗಳು

ಸಂಘದ ಗ್ರಾಹಕರಿಗೆ ಒಂದೇ ಸೂರಿನಡಿ ಎಲ್ಲಾ ರೀತಿಯ ಬ್ಯಾಂಕಿಂಗ್ ಸೇವೆಗಳು ಲಭ್ಯವಿರಬೇಕು ಎನ್ನುವ ನಿಟ್ಟಿನಲ್ಲಿ ಹೆಚ್ಚಿನ ಸೌಲಭ್ಯಗಳನ್ನು ನಮ್ಮ ಸಂಸ್ಥೆಯಲ್ಲಿ ಅಳವಡಿಸಿಕೊಂಡಿರುತ್ತೇವೆ. ಇವುಗಳಲ್ಲಿ ಮುಖ್ಯವಾದವುಗಳೆಂದರೆ ಬೆಳ್ತಂಗಡಿ, ಕಲ್ಲಡ್ಕ, ಬೆಳುವಾಯಿ, ಬಜಗೋಳಿ, ಕುಪ್ಪೆಪದವು ಮತ್ತು ಅಜೆಕಾರು ಶಾಖೆಗಳಲ್ಲಿ ಈ-ಸ್ಟಾಂಪಿಂಗ್ ಮತ್ತು ಬೆಳ್ತಂಗಡಿ ಮತ್ತು ಹಳೆಯಂಗಡಿ ಶಾಖೆಗಳಲ್ಲಿ ಸಾರ್ವಜನಿಕ ಸೇಫ್ ಲಾಕರ್ ವ್ಯವಸ್ಥೆ, ಎಲ್ಲಾ ಶಾಖೆಗಳಲ್ಲಿ Western Union, Xpress Money ಮತ್ತು Ria Money Transferಮೂಲಕ ಹಣ ವರ್ಗಾವಣೆ, RTGS/NEFT, ಇಸ್ಕೋ-ಟೋಕಿಯೋ ವಾಹನ ವಿಮಾ ಸೌಲಭ್ಯ, ಪಹಣಿಪತ್ರ ಪ್ರಸ್ತುತ Host To Host ಮೂಲಕ ಸಂಘದ ತಂತ್ರಾಂಶದಿಂದಲೇ ಹಣ ವರ್ಗಾವಣೆ ಮಾಡುವ ವ್ಯವಸ್ಥೆಯೊಂದಿಗೆ ಸಂಘವು ಅತ್ಯುತ್ತಮ ತಂತ್ರಜ್ಞಾನದೊಂದಿಗೆ ಬೆಳಯಬೇಕೆನ್ನುವ ಉದ್ದೇಶದೊಂದಿಗೆ ತಾಲೂಕಿನಲ್ಲೇ ಪ್ರಥಮವಾಗಿ ಸಹಕಾರ ಸಂಘದ ಹೆಸರಿನಲ್ಲಿ ತನ್ನದೇ ಆದ IFSC Code ಪಡೆದುಕೊಂಡು ಮೊಬೈಲ್ ಬ್ಯಾಂಕಿಂಗ್ ಮೂಲಕ ನೇರವಾಗಿ ಗ್ರಾಹಕರ ಖಾತೆಗೆ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗಿದೆ. ಈಗಾಗಲೆ ಮೊಬೈಲ್‌ನಿಂದ ಪಿಗ್ಗಿ ಕಲೆಕ್ಸನ್ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಕ್ಯೂಆರ್ ಕೋಡ್, ನ್ಯಾಚ್, ಇ-ಕಲೆಕ್ಸನ್ ತಂತ್ರಾಜ್ಞಾನವನ್ನು ಅಳವಡಿಸುವಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ. ಈ ಎಲ್ಲಾ ಸೇವೆಗಳ ಸದುಪಯೋಗ ಪಡೆಯಬೇಕೆಂದು ಕೋರುತ್ತೇವೆ.

ಇತರ ಸೇವೆಗಳು

ಇ-ಸ್ಟಾಂಪ್ (E-stamp)

ವೆಸ್ಟರ್ನ್ ಯೂನಿಯನ್, ರಿಯಾ ಮನಿ ಟ್ರಾನ್ಸ್‌ಫರ್, ಎಕ್ಸ್‌ಪ್ರೆಸ್ ಮನಿ

ಆರ್‌ಟಿಸಿ (RTC)

ಲಾಕರ್ ಸೌಲಭ್ಯ

ಸಾಲದ ಗ್ರಾಹಕರಿಗೆ ವಿಮಾ ರಕ್ಷಣೆ

ಸಂಸ್ಥೆಯ ಸೌಲಭ್ಯಗಳು

  • ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಕೃಷಿಯೇತರ ಎಲ್ಲಾ ರೀತಿಯ ಸಾಲ ಸೌಲಭ್ಯಗಳು.
  • ಅತೀ ಶೀಘ್ರದಲ್ಲಿ ಚಿನ್ನಾಭರಣ ಸಾಲ.
  • ಇ-ಸ್ಟಾಂಪಿಂಗ್ ಸೌಲಭ್ಯ.
  • ಆಕರ್ಷಕ ಬಡ್ಡಿದರದಲ್ಲಿ ಠೇವಣಿಗಳ ಸ್ವೀಕಾರ.
  • ಪಿಂಚಣಿ, ವಿದ್ಯಾಭ್ಯಾಸ ಹಾಗೂ ಹೆಣ್ಮಕ್ಕಳ ಮದುವೆಗೆ ಸಹಕಾರ ನೀಡುವಂತಹ ಆಕರ್ಷಕ ಠೇವಣಿ ಯೋಜನೆಗಳು.
  • ಶ್ರೀ ಗುರು ಸಾಲಗಾರರ ಮರಣನಿಧಿ.
  • ಹಿರಿಯ ನಾಗರೀಕರು, ವಿಧವೆಯರು, ದಿವ್ಯಾಂಗರು ಹಾಗೂ ಸಂಘ ಸಂಸ್ಥೆಗಳಿಗೆ ಶೇಕಡಾ 0.5% ಹೆಚ್ಚುವರಿ ಬಡ್ಡಿ.
  • ದೇಶದಾದ್ಯಂತ ಪಾವತಿಯಾಗುವ ಮಲ್ಟಿಸಿಟಿ ಚೆಕ್ / ಡಿ.ಡಿ ಸೌಲಭ್ಯ.
  • WESTERN UNION, Xpress Money & Ria Money Transfer ಸೌಲಭ್ಯ.
  • RTGS / NEFT.
  • ಗ್ರಾಹಕರಿಗೆ ಬೆಳ್ತಂಗಡಿ ಮತ್ತು ಹಳೆಯಂಗಡಿ ಶಾಖೆಗಳಲ್ಲಿ ಸೇಪ್ ಲಾಕರ್ ಸೌಲಭ್ಯವಿದೆ.
  • ಇಷ್ಟೋ-ಟೋಕಿಯೋ ವಿಮಾ ಸೌಲಭ್ಯ.
  • ಪಹಣಿಪತ್ರ (ಆರ್.ಟಿ.ಸಿ).

ಗಮನಿಸಿ

ಈ ಪುಟದಲ್ಲಿ ನಮೂದಿಸಲಾದ ಉತ್ಪನ್ನಗಳು ಮತ್ತು ಸೇವೆಗಳು ಯಾವುದೇ ಸಮಯದಲ್ಲಿ ಬದಲಾಗಬಹುದು ಎಂಬುದನ್ನು ದಯವಿಟ್ಟು ಗಮನಿಸಿ, ಆದ್ದರಿಂದ ದಯವಿಟ್ಟು ಇತ್ತೀಚಿನ ಮಾಹಿತಿಗಾಗಿ ಶಾಖೆಯನ್ನು ಸಂಪರ್ಕಿಸಿ.